ಅಂಗವಿಕಲ ಪೋರನ ಪ್ರತಿಭೆಗೆ ವಿವಿಎಸ್ ಲಕ್ಷ್ಮಣ್ ಸೆಲ್ಯೂಟ್

ನವದೆಹಲಿ: ವಿಶೇಷಚೇತನ ಬಾಲಕನ ಪ್ರತಿಭೆ, ಇಚ್ಛಾಶಕ್ತಿಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಸೆಲ್ಯೂಟ್ ಹೊಡೆದಿದ್ದಾರೆ.

‘ಇಚ್ಛಾಶಕ್ತಿ ಇರುವಲ್ಲಿ ಒಂದು ಮಾರ್ಗ ಇದ್ದೇ ಇರುತ್ತದೆ’ ಎಂಬ ಜನಪ್ರಿಯ ಮಾತಿದೆ. ಜೀವನವು ಎಲ್ಲಾ ರೀತಿಯ ಬೌಲರ್‌ಗಳನ್ನು ವಿವಿಧ ಹಂತಗಳಲ್ಲಿ ಎಸೆಯುತ್ತದೆ. ಇಂತಹ ದಾರಿಯಲ್ಲಿ ಸಾಗುವಾಗ ಇಚ್ಛಾಶಕ್ತಿ ಇದ್ದವರು ನ್ಯೂನತೆಗಳನ್ನು ಲೆಕ್ಕಿಸದೆ ಉಳಿದವರಿಗಿಂತ ಹೆಚ್ಚು ಯಶಸ್ವಿಯಾಗುತ್ತಾರೆ.

ಟೆಸ್ಟ್ ಸ್ಪೆಷಲಿಸ್ಟ್ ವಿವಿಎಸ್ ಲಕ್ಷ್ಮಣ್ ಅವರು ಇಂದು ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವಿಶೇಷಚೇತನ ಮಗು ನೆಟ್ ಅಭ್ಯಾಸದ ವೇಳೆ ಬೌಲಿಂಗ್ ಮಾಡುವುದನ್ನು ಕಾಣಬಹುದಾಗಿದೆ. ಮಗುವಿನ ಇಚ್ಛಾಶಕ್ತಿ ಮತ್ತು ಕಲಿಕೆಯ ಹಂಬಲವನ್ನು ನೋಡಿ ಲಕ್ಷ್ಮಣ್ ಭಾವುಕರಾಗಿದ್ದಾರೆ. “ನಮ್ಮಲ್ಲಿರುವ ವಿಶೇಷ ಚೈತನ್ಯ, ಸಾಮರ್ಥ್ಯ, ಪರಿಶ್ರಮ ಮತ್ತು ಧೈರ್ಯವನ್ನು ಯಾರಿಂದಲೂ ಕದಿಯಲು ಸಾಧ್ಯವಾಗುವುದಿಲ್ಲ. ಬಾಲಕನ ಸಹಿಷ್ಣುತೆ ಮತ್ತು ವಿಶೇಷ ಶಕ್ತಿಯ ಮನೋಭಾವಕ್ಕೆ ನನ್ನದೊಂದು ಸೆಲ್ಯೂಟ್” ಎಂದು ವಿವಿಎಸ್ ಲಕ್ಷ್ಮಣ್ ಬರೆದುಕೊಂಡಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೆ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಏಕದಿನ ನಾಯಕಿ ಮಿಥಾಲಿ ರಾಜ್ ಕೂಡ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ಜೋಡಿಯು 376 ರನ್ ಜೊತೆಯಾಟವಾಡುವ ಮೂಲಕ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

Comments

Leave a Reply

Your email address will not be published. Required fields are marked *