‘ಈತನ ಸಂಕಲ್ಪಶಕ್ತಿಗೆ ಅಂಗವೈಕಲ್ಯವೂ ಮಂಡಿಯೂರಿದೆʼ – ಕಾಲಿನಲ್ಲಿ ಪರೀಕ್ಷೆ ಬರೆದ ಬಂಟ್ವಾಳದ ವಿದ್ಯಾರ್ಥಿ

– ಫೋಟೋ ಪ್ರಕಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸುರೇಶ್‌ ಕುಮಾರ್‌

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಇಂಗ್ಲಿಷ್‌ ಪರೀಕ್ಷೆಯನ್ನು ಕಾಲಿನ ಸಹಾಯದಿಂದ ಬರೆದ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಯ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಂಟ್ವಾಳ‌ ತಾಲೂಕಿನ ಎಸ್.ವಿ.ಎಸ್ ಪ್ರೌಢ ಶಾಲೆಯಲ್ಲಿ ಕೌಶಿಕ್‌ ಪರೀಕ್ಷೆ ಬರೆದಿದ್ದ. ಈ ವೇಳೆ ಬಟ್ಟೆಯ ಮೇಲೆ ಕುಳಿತುಕೊಂಡು ಬಲಕಾಲಿನಿಂದ ಬರೆಯುತ್ತಿದ್ದ.

https://www.facebook.com/nimmasuresh/posts/3583015671725752

ಈ ಫೋಟೋವನ್ನು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಫೇಸ್‌ಬುಕ್‌, ಟ್ವಿಟ್ಟರ್‌ನಲ್ಲಿ  ಹಂಚಿಕೊಂಡಿದ್ದಾರೆ. ಬಂಟ್ವಾಳ‌ ತಾಲೂಕಿನ ಎಸ್.ವಿ.ಎಸ್ ಪ್ರೌಢ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೇ ಕಾಲಿನ ಬೆರಳುಗಳ ಮೂಲಕವೇ ಉತ್ತರ ಬರೆದ‌ ಈ ಪೋರ ಕೌಶಿಕ್ ನಿಗೆ ನನ್ನ ಹೃದಯಪೂರ್ವ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ‌ ಸಾರ್ಥಕ‌ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಈ ಫೋಟೋಗೆ ಹಲವು ಮಂದು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ, ಇವನ ಸಂಕಲ್ಪಶಕ್ತಿಗೆ ಅಂಗವೈಕಲ್ಯವೂ ಮಂಡಿಯೂರಿದೆ. ಇಂತಹವರ ನಡುವೆ ಬದುಕಿದ್ದೇವೆ ಎನ್ನುವುದೇ ನಮಗೆ ನಿಜವಾದ ಹೆಮ್ಮೆ ಅಂತ ಅನಿಸುತ್ತೆ ಎಂದು ಬರೆದಿದ್ದಾರೆ.

ದೈಹಿಕವಾಗಿಯೂ ಬೌದ್ಧಿಕ ವಾಗಿಯೂ ಅಂಗವಿಕಲತೆ ಹೊಂದಿದ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪಾಸಾದ ಉದಾಹರಣಿಗಳು ಇವೆ. ಈ ವರದಿಯನ್ನು ಪತ್ರಿಕೆಗಳು ಅಥವಾ ಟಿವಿ ಮಾಧ್ಯಮಗಳು ವರದಿಮಾಡುತ್ತಿದ್ದವು. ಆದರೆ ಶಿಕ್ಷಕರು ಮಾಡಿದ ಉತ್ತಮ ಕೆಲಸಗಳು,ಮಕ್ಕಳ ಬಗ್ಗೆ,ಶಾಲೆಗಳ ಬಗ್ಗೆ, ಇತರ ಸಾಕಷ್ಟು ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳನ್ನು ತಮ್ಮ ಎಫ್‌ಬಿ ವಾಲ್‌ನಲ್ಲಿ ಹಂಚಿಕೊಂಡು ಭಾವನಾತ್ಮಕವಾಗಿ ಪ್ರಶಂಸೆ ವ್ಯಕ್ತ ಪಡಿಸುವ, ಶಿಕ್ಷಣಮಂತ್ರಿಯನ್ನು ಪಡೆದ ಶಿಕ್ಷಣ ಕ್ಷೇತ್ರ ಧನ್ಯ.ನಿಮ್ಮನ್ನು ಮಕ್ಕಳು ಅರ್ಥ ಮಾಡಿಕೊಂಡಿದ್ದಾರೆ. ಅದಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ.

ಈತನ ಆತ್ಮವಿಶ್ವಾಸ ಶ್ಲಾಘನೀಯ. ಅಂಗವೈಕಲ್ಯ ದೇಹಕ್ಕೆ ಹೊರತು ಮನಸ್ಸಿಗಲ್ಲ ಎಂಬುದನ್ನ ಈತ ಸಾಬೀತುಪಡಿಸಿದ್ದಾನೆ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

https://twitter.com/HarishSSarathi/status/1276414427949002753

Comments

Leave a Reply

Your email address will not be published. Required fields are marked *